ಪೋಪುರಿ ಲಲಿತಾ ಕುಮಾರಿ, ವೋಲ್ಗಾ ಎಂಬ ಕಾವ್ಯನಾಮದಿಂದ ಜನಪ್ರಿಯರಾಗಿರುವ ಇವರು, ತೆಲುಗು ಕವಯಿತ್ರಿ ಮತ್ತು ಲೇಖಕಿ. ಸ್ತ್ರೀವಾದಿ ದೃಷ್ಟಿಕೋನಕ್ಕೆ ಹೆಸರುವಾಸಿಯಾಗಿದ್ದಾರೆ. ಅವರು ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದರು. ತೆಲುಗಿನಲ್ಲಿ ತಮ್ಮ 'ವಿಮುಕ್ತ ಕಧಾ ಸಂಪುಟ' ಎಂಬ ಸಣ್ಣ ಕಥಾ ಸಂಕಲನಕ್ಕಾಗಿ ೨೦೧೫ ರಲ್ಲಿ ಪ್ರತಿಷ್ಠಿತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿದ್ದಾರೆ. ಬರಹಗಾರ್ತಿಯ ಜೊತೆಗೆ, ಅವರು ಟಾಲಿವುಡ್‌ನಲ್ಲಿ ಸ್ಕ್ರಿಪ್ಟಿಂಗ್ ವಿಭಾಗದ ಮುಖ್ಯಸ್ಥರು ಹಾಗು ಪ್ರೊಫೆಸರ್ ಆಗಿದ್ದಾರೆ. ಸ್ತ್ರೀವಾದದ ಕಲ್ಪನೆಯನ್ನು ಅಷ್ಟೇನೂ ಒಪ್ಪಿಕೊಳ್ಳದ ಕಾಲದಲ್ಲಿ ಇವರ ಚಿ೦ತನೆಗಳು ಸ್ತ್ರೀವಾದದ ಬಗ್ಗೆ ದೇಶಾದ್ಯಂತ ಚರ್ಚೆಗಳನ್ನು ಪ್ರಾರಂಭಿಸಿತು. ದ ಲೈಬ್ರರಿ ಆಫ್ ಕಾಂಗ್ರೆಸ್ ಆಯ್ದ ಸಣ್ಣ ಕಥೆಗಳ ಇಂಗ್ಲಿಷ್ ಅನುವಾದಗಳನ್ನು ಒಳಗೊಂಡಂತೆ ಅವರ ಅತ್ಯಂತ ಜನಪ್ರಿಯ ಪ್ರಕಟಿತ ಕೃತಿಗಳ ಸಂಗ್ರಹವನ್ನು ಹೊಂದಿದೆ. == ಆರಂಭಿಕ ಜೀವನ ಮತ್ತು ಶಿಕ್ಷಣ == ವೋಲ್ಗಾ ಗುಂಟೂರಿನಲ್ಲಿ ನವೆಂಬರ್ ೨೭, ೧೯೫೦ ರಂದು ಜನಿಸಿದರು. ಅವರು ೧೯೭೨ ರಲ್ಲಿ ಆಂಧ್ರ ವಿಶ್ವವಿದ್ಯಾಲಯದಲ್ಲಿ ತೆಲುಗು ಸಾಹಿತ್ಯದಲ್ಲಿ ಎಂ.ಎ ಮುಗಿಸಿದರು. == ವೃತ್ತಿ == ವೋಲ್ಗಾ ತಮ್ಮ ಎಂ.ಎ ನಂತರ ೧೯೭೩ ರಿಂದ ೧೯೮೬ ರ ಅವಧಿಯಲ್ಲಿ ವಿ.ಎಸ್.ಆರ್ & ಎನ್.ವಿ.ಆರ್ ಕಾಲೇಜಿನಲ್ಲಿ ತೆಲುಗು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ನಂತರ, ಅವರು ೧೯೮೬-೧೯೯೫ ರ ಸಮಯದಲ್ಲಿ ಉಷಾಕಿರಣ್ ಮೂವೀಸ್‌ನಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸ್ಕ್ರಿಪ್ಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದರು. ಅವರು ನಂತರ ೧೯೯೧ ರಲ್ಲಿ ಮಹಿಳಾ ಸಮಸ್ಯೆಗಳನ್ನು ಪರಿಹರಿಸುವ ತೆಲಂಗಾಣ ಮೂಲದ ಎನ್‌ಜಿಒ ಅಸ್ಮಿತಾ ರಿಸೋರ್ಸ್ ಸೆಂಟರ್ ಫಾರ್ ವುಮೆನ್‌ಗೆ ಅದರ ಅಧ್ಯಕ್ಷರಾಗಿ ಸೇರಿದರು ಮತ್ತು ಪ್ರಸ್ತುತ ಸಂಸ್ಥೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾದ ತೆಲುಗು ಸಲಹಾ ಮಂಡಳಿಯ ಸಕ್ರಿಯ ಸದಸ್ಯರಾಗಿರುವ ಅಸಿಮಿತಾ ಸ೦ಸ್ಥೆಯ ಸಂಪಾದಕೀಯವಾದ ವಾಮ್ಟಿಂತಿ ಮಾಸಿ (ಸೂಟ್ ಫ಼್ರ್೦ ದ ಕಿಚನ್) ಪ್ರಕಟಣೆಯ ಸದಸ್ಯರೂ ಆಗಿದ್ದಾರೆ. === ಲೇಖಕಿ === ವೋಲ್ಗಾ ತಮ್ಮ ಸ್ತ್ರೀವಾದಿ ಸಾಹಿತ್ಯ ಕೃತಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಕಾದಂಬರಿಗಳು, ಲೇಖನಗಳು, ಕವಿತೆಗಳು ಆಧುನಿಕ ಮತ್ತು ಪ್ರಗತಿಪರ ವಿಚಾರಧಾರೆಗಳನ್ನು ಹೊಂದಿರುವ ಮಹಿಳೆಯರನ್ನು ಚಿತ್ರಿಸುತ್ತವೆ. ಅವರು ಕೆಲಸದ ಗುಣಮಟ್ಟವನ್ನು ಉಳಿಸಿಕೊಂಡು ಪಾತ್ರಗಳ ನೈಜತೆಯನ್ನು ಹಾಗೇ ನಿರ್ವಹಿಸುತ್ತಾರೆ. ಅವರು ಎಲ್ಲಾ ಕಾದಂಬರಿಗಳನ್ನು ಸಹ ಪೂರ್ಣ ಸಮಯದ ಉದ್ಯೋಗಿಯಾಗಿದ್ದಾಗ ಬರೆದರು, ಬದಲಿಗೆ ಕಾದಂಬರಿಗಳಿಗೆ ತನ್ನ ಸಮಯವನ್ನು ಸಂಪೂರ್ಣವಾಗಿ ಮೀಸಲಿಡುತ್ತಾರೆ ಎನ್ನಬಹುದು. ಅವರು ತಮ್ಮ ಮೊದಲ ಕಾದಂಬರಿ ಸಹಜವನ್ನು ೧೯೮೬ ರಲ್ಲಿ ಪ್ರಕಟಿಸಿದರು. ಈ ಕಾದಂಬರಿಯು ಪತ್ರಿಕೆಯ ಅಂಕಣಗಳಲ್ಲಿ ಚರ್ಚಾಸ್ಪದ ವಿಷಯವಾಗಿತ್ತು. ಮುಂದಿನ ವರ್ಷ, ೧೯೮೭ ರಲ್ಲಿ, ಅವರ ಎರಡನೆಯ ಕಾದಂಬರಿ ಸ್ವೆಚ್ಚಾ ಪ್ರಕಟವಾಯಿತು. ಈ ಎರಡೂ ಕಾದಂಬರಿಗಳು ಮದುವೆಯು ಮಹಿಳೆಯನ್ನು ಹಾಗು ಆಕೆಯ ಸ್ವಾತಂತ್ರ್ಯವನ್ನು ಹೇಗೆ ಬಂಧಿಸುತ್ತದೆ ಎಂಬುದನ್ನು ಹೇಳುತ್ತವೆ. == ಸಾಹಿತ್ಯ ಕೃತಿಗಳು == ಲಲಿತಾ ಕುಮಾರಿ ಸುಮಾರು ೫೦ ಪ್ರಕಟಣೆಗಳನ್ನು ಬರೆದಿದ್ದಾರೆ ಮತ್ತು ಅನುವಾದಿಸಿದ್ದಾರೆ. ಅತ್ಯಂತ ಜನಪ್ರಿಯವಾದವುಗಳನ್ನು ಕೆಳಗೆ ಪಟ್ಟಿ ಮಾಡಲಾಗಿದೆ: ಲಲಿತಾ ಕುಮಾರಿ ಅವರ ಲೇಖನಗಳು ನಿಯತಕಾಲಿಕೆಗಳು ಮತ್ತು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹೆಚ್ಚಾಗಿ ಸ್ತ್ರೀವಾದದ ಕುರಿತ೦ತೆ ಇವೆ. ಪಾಶ್ಚಿಮಾತ್ಯ ಸ್ತ್ರೀವಾದಿಗಳು, ಸ್ತ್ರೀವಾದಿ ಚಳುವಳಿ, ಫಸ್ಟ್-ವೇವ್ ಫೆಮಿನಿಸಂ ಮತ್ತು ಸೆಕೆಂಡ್ ವೇವ್ ಫೆಮಿನಿಸಂ ಅನ್ನು ತೆಲುಗು ಓದುಗರಿಗೆ ಪರಿಚಯಿಸಿದ ಮೊದಲ ವ್ಯಕ್ತಿ ಇವರು. == ಪ್ರಶಸ್ತಿಗಳು ಮತ್ತು ಗೌರವಗಳು == == ಉಲ್ಲೇಖಗಳು == == ಮೂಲಗಳು == ://..//. ://..///. 2022-08-20 ವೇಬ್ಯಾಕ್ ಮೆಷಿನ್ ನಲ್ಲಿ. ://..///------/2015/12/19/article3184504.ece1 2016-09-15 ವೇಬ್ಯಾಕ್ ಮೆಷಿನ್ ನಲ್ಲಿ. ://..///-----/2015/12/18/article3183580. 2016-09-19 ವೇಬ್ಯಾಕ್ ಮೆಷಿನ್ ನಲ್ಲಿ. ://../////.